ASSIGNMENT 10 BY SOMNATH BIRADAR

ಕೋವಿಡ -19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ ಅದರಲ್ಲೂ ಅವರು ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ನನ್ನ ಸಲಹೆ & ಕಾರ್ಯತಂತ್ರಗಳು ಈ ಕೆಳಗಿನಂತಿವೆ.
1. ಮೊದಲಿಗೆ ಪ್ರತಿ ಮಗುವಿಗೂ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ಸರಬರಾಜು ಮಾಡುವುದು.
2. ಆಯಾ ವಿಷಯ ಶಿಕ್ಷಕರು ಮಕ್ಕಳಿಗೆ ಖುದ್ದಾಗಿ ಕರೆ ಮಾಡಿ ದಿನಾಲು ಪಠ್ಯಪುಸ್ತಕದಲ್ಲಿನ ಒಂದೊಂದು ಚಟುವಟಿಕೆ ಮಾಡಲು ತಿಳಿಸುವುದು.
3. ಸ್ಮಾರ್ಟಫೋನ್ ಹೊಂದಿರುವ ಪಾಲಕರ ಮಕ್ಕಳನ್ನು ಒಳಗೊಂಡ ವಾಟ್ಸ್ಅಪ್ ಗುಂಪನ್ನು ರಚಿಸಿಕೊಳ್ಳುವುದು.
4.ಆಯಾ ದಿನದ  ವಿಷಯಗಳನ್ನು  ವಾಟ್ಸ್ಅಪ್ ಗುಂಪಿನಲ್ಲಿ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದು.
5. ಶಿಕ್ಷಕರು ತಮ್ಮ ವಿಷಯಕ್ಕೆ ಸಂಬಂಧಪಟ್ಟ ಆಡಿಯೋ & ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿಕೊಂಡು ವಾಟ್ಸ್ಅಪ್ ಗುಂಪಿನಲ್ಲಿ ಹಂಚಿಕೊಳ್ಳುವುದು.
6.ಮೊಬೈಲ್ ಮುಖಾಂತರ ಅಭ್ಯಾಸ ಮಾಡುವಾಗ ಮಕ್ಕಳ ಬಗ್ಗೆ ನಿಗಾ ವಹಿಸಲು ಪಾಲಕರಿಗೆ ಸಲಹೆ ನೀಡುವುದು.
7.ಆಯಾ ವಿಷಯಕ್ಕೆ ಸಂಬಂಧಪಟ್ಟ ಸಾಕಷ್ಟು ಅತ್ಯುತ್ತಮ ವಿಡಿಯೋಗಳು ಯ್ಯು-ಟ್ಯೂಬ್ ನಲ್ಲಿ ಲಭ್ಯವಿದ್ದು ದಿನಾಲು ಒಂದೆರಡು ವಿಡಿಯೋಗಳನ್ನು ವಾಟ್ಸ್ಅಪ್ ಗುಂಪಿನಲ್ಲಿ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದು.
8. ಅಭ್ಯಾಸ ಪುಸ್ತಕದಲ್ಲಿರುವ ಚಟುವಟಿಕೆಗಳನ್ನು  ಪಾಲಕರ ಅಥವಾ ಗೆಳೆಯರ ಸಹಕಾರದೊಂದಿಗೆ ಪೂರ್ಣಗೊಳಿಸಲು ಸಲಹೆ ಮಾರ್ಗದರ್ಶನ ನೀಡುವುದು.
9.ತಮ್ಮ ಮನೆಯಲ್ಲಿರುವ  ಅಣ್ಣ ಅಥವಾ ಅಕ್ಕನ ಸಹಾಯದಿಂದ ಮಗ್ಗಿ , ಶುದ್ಧಬರಹ , ಉಕ್ತಲೇಖನ, ಚಿತ್ರ ಬಿಡಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಲು ವಿಧ್ಯಾರ್ಥಿಗಳಿಗೆ ತಿಳಿಸುವುದು.
10. ನೀಡಿರುವ ಚಟುವಟಿಕೆಗಳನ್ನು  ವಿಧ್ಯಾರ್ಥಿಗಳು ಪೂರ್ಣಗೊಳಿಸಿರುವುದರ ಬಗ್ಗೆ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳುವುದು.